ಕೊರೊನಾ ಕಂಟಕದಿಂದ ಬಚಾವ್, ಆದರೂ ಎಚ್ಚರವಾಗಿರಲು ಸೂಚನೆ..!

admin

ಅಮೆರಿಕ ಕೊರೊನಾ ಕಂಟಕದಿಂದ ಬಚಾವ್ ಆಗಿದ್ದರೂ 2-3 ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು ಅಂತಾ ತಜ್ಞರು ಅಮೆರಿಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕನ್ನರಿಗೆ ಒಂದಿಷ್ಟು ನೆಮ್ಮದಿ ತಂದಿದೆ. ಭೂಮಿ ಮೇಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಅಮೆರಿಕ, ಕೊರೊನಾ ಕಾರಣಕ್ಕೆ ಭೂಮಿ ಮೇಲಿನ ನರಕ ಎಂಬಂತಾಗಿದೆ. ಸುಮಾರು 1 ವರ್ಷದಿಂದಲೂ ಅಮೆರಿಕ ಕೊರೊನಾ ರಾಯಭಾರಿ ಆಗಿದೆ. ಇಡೀ

ಐಟಿ ಅಧಿಕಾರಿಗಳಿಂದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ

admin

ಪುಣೆ, ಮಾರ್ಚ್ 3: ಬಿಜೆಪಿ ಸರ್ಕಾರದ ಕಟು ಟೀಕಾಕಾರರಾದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ವಿರುದ್ಧ ತೆರಿಗೆ ವಂಚನೆ ಆರೋಪದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಅವರನ್ನು ಪುಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಮುಂಬೈ ಮತ್ತು ಪುಣೆಗಳಲ್ಲಿನ ಸುಮಾರು 30 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಒಂದೇ ದಿನ ಕರ್ನಾಟಕದಲ್ಲಿ 500ರ ಗಡಿ ದಾಟಿದ ಕೊರೊನಾ ಕೇಸ್

admin

ಬೆಂಗಳೂರು, ಮಾರ್ಚ್.03: ಕೊರೊನಾವೈರಸ್ ಸೋಂಕಿತರ ಸಂಖ್ಯೆ ಕೊಂಚ ನಿಯಂತ್ರಣಕ್ಕೆ ಬಂತು ಎನ್ನುವಷ್ಟರಲ್ಲೇ ಮತ್ತೆ ರಾಜ್ಯದಲ್ಲಿ ಒಂದೇ ದಿನ 528 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಮೂವರು ಮಹಾಮಾರಿಗೆ ಬಲಿಯಾಗಿದ್ದು, ಈವರೆಗೂ ಕೊವಿಡ್-19 ಸೋಂಕಿನಿಂದ 12346 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಂದು ದಿನದಲ್ಲಿ 413 ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ

ಪಶ್ಚಿಮ ಬಂಗಾಳದಲ್ಲಿ ಲಸಿಕೆ ದಾಖಲೆಗಳಲ್ಲಿ ಪ್ರಧಾನಿ ಫೋಟೋ: ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

admin

ಕೋಲ್ಕತ್ತಾ, ಮಾರ್ಚ್.03: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಮತ್ತು ಕೊರೊನಾವೈರಸ್ ಲಸಿಕೆಯ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ್ದೆ ತೃಣಮೂಲ ಕಾಂಗ್ರೆಸ್ ಪಕ್ಷ ದೂರು ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಬುಧವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಟಿಎಂಸಿ ನಿಯೋಗ ಭೇಟಿ ಮಾಡಿತು. ಕೇಂದ್ರ ಆರೋಗ್ಯ ಮತ್ತು

ಮೋದಿ ಹೆಸರಿನ ಸ್ಟೇಡಿಯಂನಲ್ಲಿ ಸೋಲುವ ಮಾತಿಲ್ಲ; ಹೇಳಿಕೆಗೆ ಠಾಕ್ರೆ ವಿರೋಧ

admin

ಮುಂಬೈ, ಮಾರ್ಚ್ 03: ಅಹಮದಾಬಾದ್‌ನಲ್ಲಿನ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಈಚೆಗೆ ಮರುನಾಮಕರಣ ಮಾಡಿದ್ದು, ಈ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಸ್ಟೇಡಿಯಂ ಹೆಸರು ಬದಲಾವಣೆ ಮಾಡಿದ್ದರಿಂದ ಇನ್ನು ಮುಂದೆ ಯಾವ ಕ್ರಿಕೆಟ್ ಪಂದ್ಯದಲ್ಲೂ ಭಾರತ ಸೋಲುವುದಿಲ್ಲ. ಸ್ಟೇಡಿಯಂಗೆ ಮೋದಿ ಹೆಸರು ಇಟ್ಟಿದ್ದರಿಂದ ಸೋಲುವ

ನೇಪಾಳ, ಭೂತಾನ್ ಗಡಿ ಕಾವಲುಪಡೆಗೆ ಎಸ್‌ಎಸ್‌ಬಿ ಬೆಟಾಲಿಯನ್ ಬಲ

admin

ನವದೆಹಲಿ, ಮಾರ್ಚ್ 03: ನೇಪಾಳ ಹಾಗೂ ಭೂತಾನ್ ಗಡಿ ಕಾವಲು ಪಡೆಯ ಬಲ ವೃದ್ಧಿಸಲು 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ 12 ಸಶಸ್ತ್ರ ಸೀಮಾ ಬಲದ ಬೆಟಾಲಿಯನ್ ನಿಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಭೂತಾನ್ ಹಾಗೂ ಟಿಬೆಟ್‌ಗೆ ಹೊಂದಿಕೊಂಡಿರುವ ಸಿಕ್ಕಿಂನ ತ್ರಿ-ಜಂಕ್ಷನ್ ಪ್ರದೇಶ ಸೇರಿದಂತೆ ನೇಪಾಳ, ಭೂತಾನ್ ಗಡಿ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಬೆಟಾಲಿಯನ್‌ಗಳು

ಮಲೆ ಮಾದೇಶ್ವರ ಜಾತ್ರೆ; ಸ್ಥಳೀಯರಿಗೆ ಮಾತ್ರ ಅವಕಾಶ

admin

ಚಾಮರಾಜನಗರ, ಮಾರ್ಚ್ 03:  ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರನ ಬೆಟ್ಟದಲ್ಲಿ ನಡೆಯುವ ಮಹಾಶಿವರಾತ್ರಿ ಜಾತ್ರೆಗೆ ಮಲೆಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ಗ್ರಾಮಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅಧ್ಯಕ್ಷತೆಯಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ಮಾರ್ಚ್ 10 ರಿಂದ 14ರ ತನಕ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

ಬ್ರಿಟನ್ 'ಗುಮ್ಮ'ಕ್ಕೂ ಮದ್ದು: ಖುಷಿ ಸುದ್ದಿ ನೀಡಿದ ಭಾರತ್ ಬಯೋಟೆಕ್

admin

ನವದೆಹಲಿ, ಮಾರ್ಚ್ 3: ಸಂಪೂರ್ಣ ಸ್ವದೇಶಿ ಲಸಿಕೆ ಭಾರತ್ ಬಯೋಟೆಕ್‌ನ ‘ಕೋವ್ಯಾಕ್ಸಿನ್’ ಕೊರೊನಾ ವೈರಸ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಕೊನೆಗೂ ಬಿಡುಗಡೆಯಾಗಿವೆ. ಈ ಲಸಿಕೆಯು ಎರಡನೆಯ ಡೋಸ್ ಪಡೆದವರಲ್ಲಿ ಸೋಂಕು ತಗುಲದಂತೆ ಶೇ 81ರಷ್ಟು ಮಧ್ಯಂತರ ದಕ್ಷತೆ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಕೆಳ ಹಂತದಲ್ಲಿ ಕಂಡುಬಂದ ತೀವ್ರ, ಗಂಭೀರ ಮತ್ತು ಸಣ್ಣ

ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು; ಸಿ. ಎಂ. ಇಬ್ರಾಹಿಂ

admin

ಮೈಸೂರು, ಮಾರ್ಚ್ 03: “ಈಗಿನ ರಾಜಕಾರಣಿಗಳು ಹೈಬ್ರಿಡ್‌ ತಳಿಗಳು. ನಾಟಿ ತಳಿಗಳು ಈಗ ಸಿಗುತ್ತಿಲ್ಲ” ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ  ಸಿ. ಎಂ. ಇಬ್ರಾಹಿಂ ಹೇಳಿದರು. ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, “ಇತ್ತೀಚಿನ ರಾಜಕೀಯದಲ್ಲಿ ಮರ್ಯಾದಸ್ಥರು ಸಿಗೋದು ವಿರಳವಾಗಿದೆ. ವಿರೇಂದ್ರ ಪಾಟೀಲ್, ದೇವೇಗೌಡ, ಜೆ. ಎಚ್. ಪಟೇಲ್‌ ಅವರಂತವರು ಉಳಿಯಬೇಕು” ಎಂದರು. ಕಾಂಗ್ರೆಸ್

Video:”ಕಮಲಕ್ಕೆ ಹಾರಿದ 15 ಶಾಸಕರಿಗೆ ಬಿಜೆಪಿ ರಾಜಕೀಯ ಸಮಾಧಿ”

admin

ಬೆಂಗಳೂರು, ಮಾರ್ಚ್.03: ಯುವತಿ ಜೊತೆಗಿನ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಬಿಜೆಪಿಗೆ ಜಿಗಿದ 15 ಶಾಸಕರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಆಪರೇಷನ್‌ಗೊಳಪಟ್ಟು ಜಿಗಿದ “ಜಂಪಿಂಗ್ ಸ್ಟಾರ್ಸ್”ಗಳಿಗೆ ಕರ್ನಾಟಕದ ಭಾರತೀಯ ಜನತಾ ಪಕ್ಷವು ರಾಜಕೀಯ ಸಮಾಧಿ ತೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಂದೇ